ನಮಸ್ಕಾರ ಎಲ್ಲಾರಿಗು....ಇನ್ನು ಮುಂದೆ ಈ ಬ್ಲಾಗು ನನ್ನ ನವಿಲುಗರಿ
ಯಲ್ಲಿ ಮುಂದುವರಿಯಲಿದೆ ಇಲ್ಲೂ ಪ್ರೀತಿಸಿದಷ್ಟೇ ಅಲ್ಲೂ ಪ್ರಿತಿಸುವಿ ಅನ್ನುವ ನಂಬಿಕೆಯೊಂದಿಗೆ
ನಿಮ್ಮ
ನವಿಲುಗರಿ ಸೋಮು
ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ. ಮೇಲೇಳಲಾಗದೇ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ. ಇನ್ನು ಮಲಗಿದ್ದಿ ಸೊಂಬೇರಿ... ಅಂದವಳೇ ಅಮ್ಮ ಬಲವಂತವಾಗಿ ದಿಂಬನ್ನ ಬಿಸಾಕಿದರೇ..ಅಮ್ಮಾ ನಿಧಾನ ನೋವಾಗುತ್ತೆ ಕಣೆ ಅಂದು ತುಟಿ ಕಚ್ಚಿಕೊಳ್ಳುತ್ತೇನೆ..ಅಮ್ಮ ಯಾರಿಗೆ ನೋವಾಗುತ್ತೆ ಅಂತ ಅನುಮಾನದ ಕಣ್ಣುಗಳಲ್ಲಿ ನೋಡಿದರೇ ..ಹೇಗೇ ಹೇಳಲಿ ನಾನು ರಾತ್ರಿ ಪೂರ ತಬ್ಬಿ ಮಲಗುವ ದಿಂಬು ನಿನ್ನ ಪ್ರತಿರೂಪವೆಂದು..!!